Yoga Sakshatkara mattu Jivanmukti

Yoga, Shakshatkara mattu Jivanmukthi

PDF

ಯೋಗ, ಸಾಕ್ಷಾತ್ಕಾರ ಮತ್ತು ಜೀವನ್ಮುಕ್ತಿ

ಮನಸ್ಸನ್ನು ಶುದ್ಧಗೊಳಿಸಿ ಧ್ಯಾನಯೋಗ್ಯವಾಗಿಸುವುದು ಹೇಗೆ? ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವ ಬಗೆ ಏನು? ಚಿತ್ತೈಕಾಗ್ರತೆಗೆ ಪ್ರಾಣಾಯಾಮ ಹೇಗೆ ಸಹಾಯಕ? ಧ್ಯಾನದಿಂದ ಸಮಾಧಿಯನ್ನು ಸಾಧಿಸುವ ಉಪಾಯಗಳಾವುವು? ಶಾಸ್ತ್ರಗಳ ಅಧ್ಯಯನ ಮತ್ತು ಅದ್ವೈತ-ವೇದಾಂತದ ಮನನ-ನಿದಿಧ್ಯಾಸನಗಳಿಂದ ಆತ್ಮ-ಸಾಕ್ಷಾತ್ಕಾರ ಮತ್ತು ಭವಬಂಧನ-ಮುಕ್ತಿ ಹೇಗೆ ಸಿದ್ಧಿಸುತ್ತವೆ? ಇವೇ ಮೊದಲಾದ ಪ್ರಶ್ನೆಗಳು ಆಧ್ಯಾತ್ಮ ಸಾಧಕರನ್ನು ಕಾಡುತ್ತವೆ.

ಭಕ್ತಿ, ಕರ್ಮ-ಯೋಗ, ಕುಂಡಲಿನೀ-ಯೋಗ, ನಾದಾನುಸಂಧಾನ ಮತ್ತಿತರ ವಿವರಗಳನ್ನು ಯೋಗಿಶ್ರೇಷ್ಠರೂ, ಅನುಪಮ ಅದ್ವೈತ-ವೇದಾಂತಿಗಳೂ, ಸತತ ಸಾಧನೆಗಳನ್ನು ಕೈಗೊಂಡು ತಮ್ಮ 19 ಹರೆಯದ ಎಳೆಯ ಪ್ರಾಯದಲ್ಲೇ ಆತ್ಮ-ಸಾಕ್ಷಾತ್ಕಾರವನ್ನು ಪಡೆದು ಜೀವನ್ಮುಕ್ತರೂ ಆಗಿದ್ದ 20ನೇ ಶತಮಾನದ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಆಧ್ಯಾತ್ಮಿಕ ಸಾಧನೆಗಳ ಮೂಲಕ ಇಲ್ಲಿ ಪಡೆಯಬಹುದಾಗಿದೆ.